ಸಾವಿರ ಪೆಟ್ಟು ಕೊಟ್ಟರು ನಾ ಬೀಳುವುದಿಲ್ಲವೆನುತ ಕೋಟಿ ಕೋಟಿ ಜನರ ಪೊರೆಯುತ್ತಿರುವ ಮುಂಬೈ ಎಂಬ ಮಹಾ ತಾಯಿಗೆ, ಏನೇ ಆಗಲಿ ಹೀಗೆ ಇರುವೆವು ಎಂದು ಮೊಗದಲ್ಲಿ ತುಂಬು ನಗೆಯ ಸೂಸುವ ಮುಂಬೈ ಮಹಾ ಜನತೆಗೆ ಕಣ್ತುಂಬಿ ನಮಿಸುತ್ತಾ ಅಗಲಿದ ಬಂಧುಗಳಿಗೆ ನಮ್ಮ ನಮನಗಳನ್ನು ಸಲಿಸೋಣ…
ಆರಿ ಹೋದವು
ನೂರು ದೀವಿಗೆಗಳು
ಕೋಟಿ ಕಂಗಳ ಬೆಳಕ ಕಾಯಲು
ಕರಗಿ ಹೋದವು
ಸಾವಿರ ಆಸೆಗಳು
ಕೋಟಿ ಭಾವಗಳ ಒಂದು ಮಾಡಲು
ಕೋಟಿ ಪ್ರಣಾಮಗಳು
ಆ ಬೆಳಕ ಕಾಯ್ದ
ಉಕ್ಕು ಕೈಗಳಿಗೆ
ಅನಂತ ನಮನಗಳು
ಆ ಬೆಳಕಿಗುಸಿರು ಹೊಯ್ದ
ಅಮರ ಜೀವಗಳಿಗೆ
ಧಿಕ್ಕಾರವಿರಲಿ
ನಡೆದಾಡುವ ಪಿಶಾಚಗಳು
ಮಾನವರಾದುದಕ್ಕೆ
ಧಿಕ್ಕಾರವಿರಲಿ
ಅವ ಪೊರೆದು ತಾ ಬದುಕುವ
ರಕ್ತ ಪಿಪಾಸುಗಳಿಗೆ
ಇನ್ನಾದರೂ
ಮೇಲೇಳುವ
ಈ [...]
ನಿನ್ನ ನಗೆ ನೆನಪು,
ನಿನ್ನ ಕೈ ಬಿಸುಪು,
ಕಳೆದ ಕವಿತೆ ಸಾಲು,
ಬರೆದ ಸವಿ ಸಮಯ,
ಜತೆ ನಡೆದ ಸಾಗರ ತೀರ,
ಸುಳಿವ ಹುಣ್ಣಿಮೆ ಗಾಳಿ,
ಈ ಎಲ್ಲದಕೂ
ನನ್ನೆರಡು ಕಣ್ಣ ಹನಿ ಕಾಣಿಕೆಯೇ…??
ಇಲ್ಲ ಬಿಡು…
ನನ್ನ ಪ್ರೀತಿ…
ನಿನ್ನ ನೆನಪು ಅಷ್ಟು
ಬಡವಲ್ಲ ಬಿಡು….
—-
ನಿನ್ನ ನೆನಪು…
ಚಿಗುರು ಮಾವನ್ನರಸಿ
ಹೊರಡುವ
ಕೋಗಿಲೆಯ ಇಂಪು,
ಬಿರು ಬೇಸಿಗೆಯಲ್ಲಿ
ಅರ್ಧ ಸುರಿದ ಮಳೆ,
ಒಟ್ಟಿನಲ್ಲಿ ನನ್ನ ಮನದ
ನೆಮ್ಮದಿ ಕೆಡಿಸಿದ
ಸುಂದರ ಕನಸು…
ಪುಟ್ಟಾ………
ಯಾಕೋ ತುಂಬಾ ಬೇಸರವಾಗ್ತಿದೆ ಕಣೆ. ಮಳೆಗಾಗಿ ಕಾದ ನೆಲ, ಮಳೆ ಬರದೆ ಇದ್ದಾಗ ಬಿಡುವ ನಿಟ್ಟುಸಿರನಷ್ಟು ತಾಪ ಒಳಗೆ ಸುಡ್ತಾ ಇದೆ. ಹೀಗೆ ಇದ್ದಕ್ಕಿದ್ದ ಹಾಗೆ ಕಾಡೋ ಖಿನ್ನತೆ ಜೊತೆಗೆ ನಿನ್ನ ನೆನಪೂ ಸೇರಿಬಿಟ್ರೆ, ಥೂ… ಇದೂ ಒಂದು ಬದುಕಾ….?? ಅನ್ಸಿಬಿಡುತ್ತೆ ಕಣೆ. ಆ ಬೇಗೆ ಯಾರ್ಗೂ ಬೇಡ ಕಣೆ. ನಿನ್ನ ನೆನಪೋ, ಅದೂ ಹೊತ್ತಲ್ಲದ ಹೊತ್ತಲ್ಲಿ ಬರುತ್ತೆ. ಕಡಲಿಗಾದ್ರೂ ತೀರ ಮೀರದ [...]
ಹುಡುಗಿ…
ನೀನು ಕವಿಯ ಮನಸು,
ನಾ ಬರೆದಿಟ್ಟ ಕನಸು,
ಮುಚ್ಚಿಟ್ಟ ಕವಿತೆ,
ಚಿಮ್ಮುವ ಭಾವದ ಒರತೆ,
ಯಾರೋ ಬರೆದು
ಹಾಡಲು ಮರೆತ
ಪ್ರೇಮ ಗೀತೆ….
…… ಗಣೆಶ…
ನೆನಪಾಗಿ ಕಾಡಿದವಳು,
ಕಳೆದಿರುಳ ಕನಸೊಳಗೆ..
ಕಾಡಿದೆ ನಿನ್ನ ನೆರಳು,
ನನ್ನ ಬಾಳ ಪಥದೊಳಗೆ..
ಕಣ್ಣೊಳಗೆ ಕೂತ ಕನಸಿಗೆ,
ನೂರು ಬಣ್ಣ ಕೊಟ್ಟವಳು..
ಮನದೊಳಗೆ ಅವಿತ ಪದಕೆ
ಕವಿತೆ ಹೆಸರ ಇಟ್ಟವಳು..
ಬರಿದಾದ ಎದೆ ಕಾಗದದಿ,
ಒಲುಮೆ ಹಾಡ ಬರೆದವಳು..
ಮೌನದ ನೀರವತೆಗೆ,
ಸಂಗೀತ ಕಲಿಸಿದವಳು..
ನಗುತ ನೀ ನಿಂತಾಗ
ತೊಲಗಿತು ಆ ಕಾರಿರುಳು..
ನೀನಿಲ್ಲದೆ ನರಳಿದೆ ನೋಡು,
ಹುಣ್ಣಿಮೆ ಚಂದಿರನಿರುಳು..
ಎದೆ ನೋವ ಮರೆಸುವ ನೆವದಿ,
ಮಧುರವಾಗಿ ಕೊಲುವವಳು..
ಜತನವಾಗಿಟ್ಟ ಕನಸ,
ಕೇಳಿ ನಗೆಯಾಡುವವಳು..
ಇನ್ನೇನು ಬಣ್ಣಿಸಲಿ ನೀ ಹೇಳು…??
— ಗಣೇಶ…